ಬೆಸ್ಟ್ ಫ್ರೆಂಡ್ಸ್ ಸಿನಿಮಾ ಸ್ಟಿಲ್
ಬೆಂಗಳೂರು: ಹೆಣ್ಣು-ಗಂಡು ಪ್ರೀತಿ ಮಾಡಿ ಮದುವೆಯಾಗಿ ಒಟ್ಟಿಗೆ ಜೀವನ ಮಾಡುವುದು ಸರ್ವೇ ಸಾಮಾನ್ಯ, ತಾನು ಪ್ರೀತಿಸಿದ ಹುಡುಗಿ/ಹುಡುಗ ಸಿಗಲ್ಲಿಲ್ಲವೆಂದು ಪ್ರೇಮಿಗಳು ಹಲ್ಲೆ ಮಾಡುವುದು, ಕೊಲ್ಲಲು ಯತ್ನಿಸುವುದು ಕೂಡ ಸಮಾಜದಲ್ಲಿ ಮಾಮಾಲಾಗಿದೆ, ಈ ಸಂಬಂಧ ಹಲವು ಸಿನಿಮಾಗಳುತೆರೆ ಕಂಡಿವೆ. ಆದರೆ ಹೆಣ್ಣನ್ನು ಹೆಣ್ಣೇ ಪ್ರೀತಿಸುವುದು, ಅವಳಿಗಾಗಿ ಹಾತೊರೆಯುವಂತೆ ಕಥೆಯುಳ್ಳ ಸಿನಿಮಾ ಇದುವರೆಗೂ ಕನ್ನಡದಲ್ಲಿ ತೆರೆ ಕಂಡಿಲ್ಲ,
ಸಲಿಂಗ ಕಾಮ- ಪ್ರೇಮ- ಸಂಸಾರ ಇಂಥವುಗಳನ್ನು ಹಾಲಿವುಡ್ ಸಿನಿ ಜಗತ್ತು ತೆರೆ ಮೇಲಿಟ್ಟಿದೆ. ಬಾಲಿವುಡ್'ನಲ್ಲಿ ಒಂದಷ್ಟು ಸಿನಿಮಾಗಳು ಬಂದಿವೆ. ಆದರೆ ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಸಲಿಂಗ ಕಾಮದ ಬಗ್ಗೆ ಸಿನಿಮಾ ತಯಾರಾಗುತ್ತಿದೆ.ಬೆಸ್ಟ್ ಫ್ರೆಂಡ್ಸ್ ಎನ್ನುವ ಟೈಟಲ್ ಹೊಂದಿರುವ ಈ ಸಿನಿಮಾದಲ್ಲಿ ಹೆಣ್ಣು ಹೆಣ್ಣನ್ನೇ ಪ್ರೀತಿಸುವ ಕತೆಯಿದೆ.
ನಿರ್ದೇಶಕ ಟೇಶಿ ವೆಂಕಟೇಶ್ ಅವರು ಒಂದು ನೈಜ ಘಟನೆಯನ್ನು ಮುಂದಿಟ್ಟುಕೊಂಡು ‘ಬೆಸ್ಟ್ ಫ್ರೆಂಡ್ಸ್’ ಎನ್ನುವ ಸಿನಿಮಾ ಮಾಡಿದ್ದಾರೆ. ಹಾಸನದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಶ್ರುತಿ ಮತ್ತು ರಶ್ಮಿ ಇಬ್ಬರು ಗೆಳತಿಯರು. ಮೂರು ವರ್ಷಗಳ ಕಾಲ ಪರಸ್ಪರ ಸಂಬಂಧವಿರಿಸಿಕೊಂಡಿರುತ್ತಾರೆ. ಇದನ್ನು ತಿಳಿದ ರಶ್ಮಿ ಪೋಷಕರು ಆಕೆಯನ್ನು ಹಾಸ್ಟೆಲ್ ನಿಂದ ಕರೆತಂದು ತಮ್ಮ ಬಳಿ ಇರಿಸಿಕೊಳ್ಳುತ್ತಾರೆ,
ಒಬ್ಬಾಕೆ ತಮಗೆ ಸಿಗದ ಗೆಳತಿ ಬೇರೆಯವರಿಗೂ ಸಿಗಬಾರದು ಎಂದುಕೊಂಡು ರಶ್ಮಿ, ನವೆಂಬರ್ 28 2012 ರಂದು ತನ್ನ ಸ್ನೇಹಿತೆ ಶೃತಿಯ ಮೇಲೆ ಚಲಿಸುತ್ತಿದ್ದ ಬಸ್ ನಲ್ಲಿ ಮಚ್ಚಿನಿಂದ ಕೊಚ್ಚಿ ಕೊಲೆ ಪ್ರಯತ್ನ ನಡೆಸಿ ಜೈಲು ಸೇರಿದರು. ಶೃತಿ ನಾಪತ್ತೆಯಾದಳು, ಈ ಕಥೆಯನ್ನಾಧರಿಸಿ ಟೇಶಿ ವೆಂಕಟೇಶ್.
ಘಟನೆಯ ಸುತ್ತ ಒಂದಿಷ್ಟು ಸಂಶೋಧನೆ ಮಾಡಿಕೊಂಡು ನೈಜತೆ ಮತ್ತು ಕಾಲ್ಪನಿಕತೆಯನ್ನು ಬೆರೆಸಿಕೊಂಡು ಈ ಸಿನಿಮಾ ಮಾಡಿದ್ದಾರೆ.
ಸೆಕ್ಷನ್ 377 ರ ಪ್ರಕಾರ ಸಲಿಂಗ ಕಾಮ ಅಪರಾಧ ಎಂದು ಹೇಳಲಾಗುತ್ತದೆ. ಇದಕ್ಕಾಗಿ ಅಲ್ಪಸಂಖ್ಯಾತರು 1860 ರಿಂದಲೂ ಹೋರಾಟ ನಡೆಸುತ್ತಿದ್ದಾರೆ. ಸುಮಾರು 158 ವರ್ಷ ಕಳೆದರು ಅವರಿಗೆ ಇನ್ನೂ ಅವು ಹಕ್ಕು ಸಿಕ್ಕಿಲ್ಲ, ಸುಮಾರು 26 ದೇಶಗಳು ಸಲಿಂಗ ಕಾಮಕ್ಕೆ ಅನುಮತಿ ನೀಡಿವೆ, ಉಳಿದ ದೇಶಗಳಲ್ಲಿ ತಮ್ಮ ಹಕ್ಕು ಪಡೆಯಲು ಹೋರಾಟ ಮುಂದುವರಿಯುತ್ತಲೇ ಇದೆ ಎಂದು ವೆಂಕಟೇಶ್ ಹೇಳಿದ್ದಾರೆ.
ಬೆಸ್ಟ್ ಫ್ರೆಂಡ್ಸ್ ಸಿನಿಮಾವನ್ನು ಲಯನ್ ವಿ ವೆಂಕಟೇಶ್ ನಿರ್ಮಿಸಿದ್ದು, ಸುಮತಿ ಪಾಟೀಲ್ ನಟಿಸಿದ್ದಾರೆ. ಆರವ್ ರಿಶಿಕ್ ಸಂಗೀತ ನೀಡಿದ್ದು, ರವಿ ಸುವರ್ಣ ಮತ್ತು ಧನುಷ್ ಛಾಯಾಗ್ರಹಣವಿದ್ದು ಮೇ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos